Index   ವಚನ - 244    Search  
 
ಲಿಂಗ[ದಲ್ಲಿ] ದ್ರೋಹದವನ ಮುಖವ ನೋಡಲಾಗದು, ಮತ್ತೆ ನೋಡಬಹುದು, ಏಕೆ? ಮುಂದೆ ಗುರುವಿಪ್ಪ ಕಾರಣ. ಗುರುವಿನಲ್ಲಿ ದ್ರೋಹದವನ ಮುಖವ ನೋಡಲಾಗದು [ಮತ್ತೆ] ನೋಡಬಹುದು, ಏಕೆ? ಮುಂದೆ ಜಂಗಮವಿಪ್ಪ ಕಾರಣ. ಜಂಗಮದಲ್ಲಿ ದ್ರೋಹದವನ ಮುಖವ ನೋಡಲಾಗದು, [ಮತ್ತೆ] ನೋಡಬಹುದು, ಏಕೆ? ಮುಂದೆ ಪ್ರಸಾದವಿಪ್ಪ ಕಾರಣ. ಪ್ರಸಾದದಲ್ಲಿ ದ್ರೋಹದವನ ಮುಖವ ನೋಡಲಾಗದು, ಮತ್ತೆ ನೋಡಬಹುದು [ಏಕೆ?] ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದದಿಂದ ಪರವಿಲ್ಲವಾಗಿ.