Index   ವಚನ - 267    Search  
 
ಲಿಂಗದ ಪೂರ್ವಾಶ್ರಯವ ಕಳೆಯ ಬಲ್ಲಾತನೆ ಭಕ್ತ. ಗುರುವಿನ ಪೂರ್ವಾಶ್ರಯವ ಕಳೆಯಬಲ್ಲಾತನೆ ಶಿಷ್ಯ. ಪ್ರಸಾದದ ಪೂರ್ವಾಶ್ರಯವ ಕಳೆಯಬಲ್ಲಾತನೆ ಪ್ರಸಾದಿ. ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆಯಬಲ್ಲರೆ. ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.