Index   ವಚನ - 271    Search  
 
ಅಚ್ಚಪ್ರಸಾದವೆಂದು ಹುಸಿದು, ತನುಮನದ ಹವಣಿಗೆ ಗಡಣಿಸಿಕೊಂಬರು, ತನುಮನ ಮುಟ್ಟಿದ ಓಗರ ಲಿಂಗಾರ್ಪಿತಕ್ಕೆ ಸಲ್ಲದು. ಅರ್ಪಿತವನುಂಡು ಅಚ್ಚಪ್ರಸಾದಿಗಳೆಂಬವರನು ಲಿಂಗದಲ್ಲಿ ಸಮ್ಯಕ್‌ ಶರಣರು ಮೆಚ್ಚರು. ಬಂದುದ ಕೂಡಲಚೆನ್ನಸಂಗಂಗರ್ಪಿಸಿ ಕೊಳಬಲ್ಲಡಾತನೆ ಅಚ್ಚಪ್ರಸಾದಿ.