Index   ವಚನ - 279    Search  
 
ಲಿಂಗಾರೋಪಿತ ಮುಖದಿಂದ ಬಂದುದು ಪಾದೋದಕ, ಲಿಂಗಾವಧಾರಿತ ಮುಖದಿಂದ ಬಂದುದು ಲಿಂಗೋದಕ, ಲಿಂಗಾರ್ಪಿತ ಮುಖದಿಂದ ಬಂದುದು ಪ್ರಸಾದೋದಕ, "ಪಾದೋದಂ ತ್ರಿವಿಧಂ (ಪ್ರೋಕ್ತಂ)ಆರೋಪ್ಯಂ ಚಾವಧಾರಿತಮ್ ಲಿಂಗಾರ್ಪಿತಂ ಪ್ರಸಾದಂ ಚ ತಥಾ ಲಿಂಗೋದಕಂ ಭವೇತ್" ಇಂತು ಮಜ್ಜನ ಭೋಜನ ಅಭಿಮುಖದಿಂದ ತ್ರಿವಿಧೋದಕವನು ಕೂಡಲಚೆನ್ನಸಂಗಾ ನಿಮ್ಮ ಶರಣನೇ ಬಲ್ಲ.