Index   ವಚನ - 281    Search  
 
ರೂಪಿನ ಪೂರ್ವಾಶ್ರಯವ ಕಳೆದು ಆಯತಕ್ಕೆ ಕೊಟ್ಟು ಕೊಳಬಲ್ಲನಾಗಿ ಶುದ್ಧಪ್ರಸಾದಿ. ರುಚಿಯ ಪೂರ್ವಾಶ್ರಯವ ಕಳೆದು ಸ್ವಾಯತಕ್ಕೆ ಕೊಟ್ಟು ಕೊಳಬಲ್ಲನಾಗಿ ಸಿದ್ಧಪ್ರಸಾದಿ. ಈ ಉಭಯ ಕ್ರೀಯನುಭಾವವಳಿದಾತನೆ ಕೂಡಲಚೆನ್ನಸಂಗನಲ್ಲಿ ಪ್ರಸಿದ್ಧಪ್ರಸಾದಿ.