Index   ವಚನ - 304    Search  
 
ಅವಸರ, ಆರೋಗಣೆ, ಆಪ್ಯಾಯನ- ತ್ರಿವಿಧವೂ ಲಿಂಗ ಮುಖದಲ್ಲಿ ಅರ್ಪಿತವಾಗೆ, ಆತನ ಪ್ರಸಾದಿಯೆಂಬೆನು. ಅವಸರ ಅನವಸರ ಆತ್ಮದಿಚ್ಛೆ ಲಿಂಗಮುಖದಲ್ಲಿ ಅರ್ಪಿತವಿಲ್ಲಾಗಿ ಆತನನೆಂತು ಪ್ರಸಾದಿಯೆಂಬೆನು? ಅವಸರ ಅನವಸರವರಿದು ವೇಧಿಸಬಲ್ಲರೆ ಆತನ ಪ್ರಸಾದಿಯೆಂಬೆನು. "ಲಿಂಗಸ್ಯಾವಸರೇ ಯಸ್ತು ಅರ್ಚ್ಯಂ ದದ್ಯಾತ್ ಸುಖಂ ಭವೇತ್" ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಅವಸರವರಿದು ಅರ್ಪಿಸುವ ಅರ್ಪಣೆ ಸದ್ಭಾವಿಗಲ್ಲದಿಲ್ಲ.