ಅಂಗದ ಕೊನೆಯಲ್ಲಿ ಲಿಂಗ ಮುಂತಲ್ಲದೆ
ಸಂಗವ ಮಾಡನಾ ಶರಣನು,
ನಯನದ ಕೊನೆಯಲ್ಲಿ ಲಿಂಗ ಮುಂತಲ್ಲದೆ
ಅನ್ಯವ ನೋಡನಾ ಶರಣನು,
ಶ್ರೋತ್ರದ ಕೊನೆಯಲ್ಲಿ ಲಿಂಗ ಮುಂತಲ್ಲದೆ
ಅದೇನು ಕಾರಣವೆಂದಡೆ
ಅನ್ಯವ ರುಚಿಸನಾ ಶರಣನು,
ನಾಸಿಕದ ಕೊನೆಯಲ್ಲಿ ಲಿಂಗ ಮುಂತಲ್ಲದೆ
ಅನ್ಯವ ವಾಸಿಸನಾ ಶರಣನು,
ಜಿಹ್ವೆಯ ಕೊನೆಯಲ್ಲಿ ಲಿಂಗ ಮುಂತಲ್ಲದೆ
ಅನ್ಯವ ರುಚಿಸನಾ ಶರಣನು,
ಕೂಡಲಚೆನ್ನಸಂಗಾ,
ನಿಮ್ಮ ಶರಣ ಸರ್ವಾಂಗಲಿಂಗಿಯಾದ ಕಾರಣ.