Index   ವಚನ - 321    Search  
 
ಜಿಹ್ವೆ ಗುರು, ಕಂಗಳು ಲಿಂಗ, ನಾಸಿಕ ಆಚಾರ, ಶ್ರೋತ್ರ ಪ್ರಸಾದ, ಹಸ್ತ ಜಂಗಮ, ಭಾವದಲ್ಲಿ ಮಹಾಲಿಂಗ, "ಆಚಾರಸ್ಯ ಮುಖಂ ಘ್ರಾಣಃ ಮುಖಂ ಜಿಹ್ವಾ ಗುರೋಸ್ತಥಾ ಶಿವಲಿಂಗಮುಖಂ ನೇತ್ರಂ ಮಹಾಲಿಂಗಂ ಚ ಭಾವನೇ ಇತಿ ಭೇದಮುಖಂ ಜ್ಞಾತ್ವಾ ಅರ್ಪಿತಂ ಚ ವಿಶೇಷತಃ" ಎಂದುದಾಗಿ ಕೂಡಲಚೆನ್ನಸಂಗಾ ನಿಮ್ಮ ಶರಣ ಸರ್ವಾಂಗಪ್ರಸಾದಿ.