ಚತುರ್ಗ್ರಾಮ ಪಂಚೈದು
ಭೂತದೊಳಗೆ ಸ್ಥೂಲವಾವುದು?
ಸೂಕ್ಷ್ಮವಾವುದು? ಎಮಗೆ ಬಲ್ಲವರು ನೀವು ಹೇಳಿರೇ.
ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ,
ಆವುದು ಘನ, ಆವುದು ಕಿರಿದು?
ಎಮಗೆ ಬಲ್ಲವರು ನೀವು ಹೇಳಿರೇ,
ಶುದ್ಧ ಸಿದ್ಧ ಪ್ರಸಿದ್ಧವೆಂದು ಹೆಸರಿಟ್ಟುಕೊಂಡು ನುಡಿವಿರಿ,
ಓಗರವಾವ ಕಡೆ? ಪ್ರಸಾದವಾವ ಕಡೆ?
ಎಮಗೆ ಬಲ್ಲವರು ನೀವು ಹೇಳಿರೇ,
ಇಕ್ಕಿದ ರಾಟಳ ತುಂಬುತ್ತ ಕೆಡಹುತ್ತಲಿದೆ.
ಇಕ್ಕಿದ ರಾಟಳ ಮುರಿದು ಸೂತ್ರ ಹರಿದು ನಿಶ್ಶೂನ್ಯವಾದಡೆ
ಕೂಡಲಚೆನ್ನಸಂಗನಲ್ಲಿ ಮಹಾಪ್ರಸಾದಿಯೆಂಬೆನು.
Art
Manuscript
Music
Courtesy:
Transliteration
Caturgrāma pan̄caidu
bhūtadoḷage sthūlavāvudu?
Sūkṣmavāvudu? Emage ballavaru nīvu hēḷirē.
Kālacakra karmacakra nādacakra binducakra,
āvudu ghana, āvudu kiridu?
Emage ballavaru nīvu hēḷirē,
śud'dha sid'dha prasid'dhavendu hesariṭṭukoṇḍu nuḍiviri,
ōgaravāva kaḍe? Prasādavāva kaḍe?
Emage ballavaru nīvu hēḷirē,
ikkida rāṭaḷa tumbutta keḍahuttalide.
Ikkida rāṭaḷa muridu sūtra haridu niśśūn'yavādaḍe
kūḍalacennasaṅganalli mahāprasādiyembenu.