Index   ವಚನ - 328    Search  
 
ಕಾಲಚಕ್ರವ ಗುರುವಿಂಗಿತ್ತು, ಕರ್ಮಚಕ್ರವ ಲಿಂಗಕ್ಕಿತ್ತು, ನಾದಚಕ್ರವ ಜಂಗಮಕ್ಕಿತ್ತು, ಬಿಂದುಚಕ್ರವ ಪ್ರಸಾದಕ್ಕಿತ್ತು, ಇಂತೀ ನಾಲ್ಕಕ್ಕೆ ನಾಲ್ಕನು ಕೊಟ್ಟು ಕೊಂಡೆನೆಂಬುದಿಲ್ಲ. ಬಯಲಲೊದಗಿದ ಘಟವು, ಕೂಡಲಚೆನ್ನಸಂಗಾ ನಿಮ್ಮ ಶರಣ.