Index   ವಚನ - 346    Search  
 
ಘಟಸಂಸ್ಕಾರದಲ್ಲಿ ಪಟಲ ಹರಿವುದೆ, ಜೀವಸಂಸ್ಕಾರವಿಲ್ಲದನ್ನಕ್ಕ? ವೇಷಧಾರಿತನದಲ್ಲಿ ಗ್ರಾಸವಹುದಲ್ಲದೆ, ಜ್ಞಾನಸಂಸ್ಕಾರವಿಲ್ಲದನ್ನಕ್ಕ ಭವವೆಂತು ಹರಿವುದು? ಅಂಗಭವಿಯನು ಲಿಂಗಭವಿಯನು ಕಳೆದುಳಿದಲ್ಲದೆ, ಕೂಡಲಚೆನ್ನಸಂಗಯ್ಯನ ಹೊದ್ದಬಾರದು.