Index   ವಚನ - 348    Search  
 
ಉಲಿಗರ ಮಾತು, ಊರುಗರ ತೋಟಿಯೊಳಗುಂಟೆ ಲಿಂಗಾನುಭಾವ? ರಚ್ಚೆಯ ಕೆಟ್ಟ ಬೀದಿಯ ಮಾತಿನೊಳಗುಂಟೆ ಲಿಂಗಾನುಭಾವ? ಸಂತೆಯೊಳಗೆ ಸಮಾಧಿಯುಂಟೆ? ಇದು ಕಾರಣ, ಕೂಡಲಚೆನ್ನಸಂಗಯ್ಯನ ಅನುಭಾವ ಹೊರವೇಷದ ವಾಚಾಳರಿಗೆಲ್ಲಿಯದು.