Index   ವಚನ - 353    Search  
 
ಒಡಲಗುಣಧರ್ಮವನು ಬಿಡದೆ ನಡೆವನ್ನಕ್ಕ ಎಡೆವರಿಯದ ಪೂಜೆಯನವರೆತ್ತ ಬಲ್ಲರು? ಉದಯದಲಾದ ಪೂಜೆ, ಅಸ್ತಮಾನದಲೆಂಜಲೆಂಬರು. ಇಂತೆಂಬ ಭಂಗಿತರ ಮುಖವ ನೋಡಲಾಗದು. ಅಗ್ನಿಯೆಂಜಲನುಂಡು ಲಿಂಗದಲ್ಲಿ ಸಯವನರಸುವ ಭಂಗಿತರನೇನೆಂಬೆ ಕೂಡಲಚೆನ್ನಸಂಗಮದೇವಾ!