Index   ವಚನ - 365    Search  
 
ದೇಹದ ಬೆಂಬಳಿಯ ದೇಹಿಕನಾದಡೆ ಸದಾಚಾರವಳವಡುವುದೆ? ಜೀವದ ಬೆಂಬಳಿಯ ಜೀವಿತನಾದಡೆ ಪ್ರಸಾದಸ್ಥಲವಳವಡುವುದೆ? ಬೆಸನದ ಬೆಂಬಳಿಯ ವ್ಯಾಪಕನಾದಡೆ ಜಂಗಮ ಪ್ರೇಮವಳವಡುವುದೆ? ಕಾಲಕರ್ಮಪ್ರಳಯಜೀವಿಗಳು ತ್ರಿವಿಧ ಸಂಪನ್ನರಾಗಲರಿವರೆ? ಅರಿವು ಮರಹು ಕುರುಹುಳ್ಳನ್ನಕ್ಕ ಪ್ರಾಣಲಿಂಗಸಂಬಂಧಿಗಳಾಗಲರಿವರೆ? ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಸರ್ವಾಚಾರಿಗಳಾಗಲರಿವರೆ?