Index   ವಚನ - 367    Search  
 
ಭಕ್ತನೆನಿಸಿಕೊಂಡು ಜಂಗಮದೊಡನೆ ದುರುಳತನವ ನುಡಿದರೆ ಅವ ಭಕ್ತನಲ್ಲ, ಲಿಂಗವಿರಳ ನೋಡಾ. ಕಾಯದಲ್ಲಿ ವಿಶ್ವಾಸ, ಪ್ರಾಣದಲ್ಲಿ ಅವಿಶ್ವಾಸ, ಕಾಯ ಪ್ರಾಣದಂತೆ ಇದ್ದಿತ್ತು, ಜಂಗಮಲಿಂಗದ ನಿಲವು. ಆತ್ಮಸ್ತುತಿ ಪರನಿಂದೆವುಳ್ಳನ್ನಕ್ಕ ಕೂಡಲಚೆನ್ನಸಂಗಮದೇವ. ಕುರುಡನ ಕೈಯ ದರ್ಪಣದಂತೆ.