Index   ವಚನ - 369    Search  
 
ಕಾಯವೂ ಜೀವವೂ, ಜೀವವೂ ಕಾಯವೂ ಎಂತು ಬೆರಸಿಪ್ಪುವಂತೆ ಲಿಂಗದೊಳಗೆ ಜಂಗಮ, ಜಂಗಮದೊಳಗೆ ಲಿಂಗ ಬೆರಸಿಪ್ಪುವು, ಭಿನ್ನಭಾವವಿಲ್ಲದೆ, "ನ ಶಿವೇನ ವಿನಾ ಶಕ್ತಿರ್ನ ಶಕ್ತಿರಹಿತಃ ಶಿವಃ| ಪುಷ್ಪಗಂಧಾವಿವಾನ್ಯೋನ್ಯಂ ಮಾರುತಾಂಬರಯೋರಿವ"|| ಎಂದುದಾಗಿ-ಭಾವ ಭೇದವಿಲ್ಲ, ಜಂಗಮವೆ ಲಿಂಗ ಕೂಡಲಚೆನ್ನಸಂಗಾ.