Index   ವಚನ - 371    Search  
 
ಗುರುಪ್ರಾಣ ಗುರುಪ್ರಾಣವೆಂಬರು, ಗುರು[ವ] ತನ್ನಲ್ಲಿ ಸಯವ ಮಾಡಲರಿಯದ ಗುರುಭ್ರಷ್ಟರ ನೋಡಾ. ಲಿಂಗಪ್ರಾಣ ಲಿಂಗಪ್ರಾಣವೆಂಬರು, ಲಿಂಗವ ತನ್ನಲ್ಲಿ ಸಯವ ಮಾಡಲರಿಯದ ಲಿಂಗಭ್ರಷ್ಟರ ನೋಡಾ, ಮಂತ್ರಪ್ರಾಣ ಮಂತ್ರಪ್ರಾಣವೆಂಬರು, ಮಂತ್ರವ ತನ್ನಲ್ಲಿ ಸಯವ ಮಾಡಲರಿಯದ ಮಂತ್ರಭ್ರಷ್ಟರ ನೋಡಾ. ಈ ತ್ರಿವಿಧ ಸಂಬಂಧವನೊಂದೆಂದರಿಯದೆ ಪ್ರಾಣಲಿಂಗಸಂಬಂಧಿಗಳೆಂಬವರನೇನೆಂಬೆ ಕೂಡಲಚೆನ್ನಸಂಗಮದೇವಾ.