Index   ವಚನ - 373    Search  
 
ಸತಿಯ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ, ಸುತನ ಕೈಯಲ್ಲಿ ಕೊಟ್ಟುದು ಪ್ರಾಣಲಿಂಗವಲ್ಲ, ಅಲಸಿ ನಾಗವತ್ತಿಗೆಯಲಿರಿಸಿದುದು ಪ್ರಾಣಲಿಂಗವಲ್ಲ, ತನುವ ಸೋಂಕಿ ವಜ್ರಲೇಪದಂತಿರಬೇಕು. ಮನ ಕರದಲ್ಲಿ ಕೊಟ್ಟ ಪ್ರಾಣಲಿಂಗ ಹಿಂಗಿದರೆ, ಅವನಂದೇ ವ್ರತಗೇಡಿ, ಕೂಡಲಚೆನ್ನಸಂಗಮದೇವಾ.