Index   ವಚನ - 399    Search  
 
ಹರಿವ ಹಾವಿಂಗೆ ಹಾಲನೆರೆವ ಪ್ರಾಣಿಗಳು ಹಾವಿನ ಅಂತರಂಗವನೆತ್ತ ಬಲ್ಲರು ಹೇಳಾ? ಕೈಲೆಡೆಗೊಟ್ಟ ಲಿಂಗಕ್ಕೆ ಮಜ್ಜನಕ್ಕೆರೆವ ಪ್ರಾಣಿಗಳು ಪ್ರಾಣಲಿಂಗಸಂಬಂಧ ಸಕೀಲವನೆತ್ತ ಬಲ್ಲರು ಹೇಳಾ? "ಪಾಣಿನಾ ಧೃತಲಿಂಗಂ ತತ್ ಪ್ರಾಣಸ್ಥಾನೇ ವಿನಿಕ್ಷಿಪೇತ್| ಯಸ್ತು ಭೇದಂ ನ ಜಾನಾತಿ ನ ಲಿಂಗಂ ಸತ್ಯ ನಾರ್ಚನಂ"|| ಲಿಂಗ ಜಂಗಮ ಒಂದೆಂದರಿಯದವರ ಮಾಟ [ಅವರ] ವಿಧಿಯಂತೆ ಕೂಡಲಚೆನ್ನಸಂಗಮದೇವಾ.