Index   ವಚನ - 416    Search  
 
ಹೃದಯಕಮಲಮಧ್ಯದಲ್ಲಿಪ್ಪ ದೇವರ ದೇವನ ದೇಹಾರವ ಮಾಡಲರಿದು. ದೇಹಿ ನಿರ್ದೇಯಿಯಾಗದನ್ನಕ್ಕ ದೇಹಾರವೆಲ್ಲಿಯದೊ? ಅನಂತಮುಖದಲ್ಲಿ ದೇಹಾರವ ಮಾಡಲು ದೇವನಲ್ಲಿಲ್ಲ ನೋಡಯ್ಯಾ. ಅಸಾಹಿತ್ಯವಿಡಿದು ಹುಸಿಯನೆ ಪೂಜಿಸಿ ಗಸಣಿಗೊಳಗಾದಿರಲ್ಲಾ. ಅನಂತವಳಿದು ನಿಜವನರಿದ ಏಕೋಗ್ರಾಹಿ ಕೂಡಲಚೆನ್ನಸಂಗಾ ನಿಮ್ಮ ಶರಣ.