Index   ವಚನ - 419    Search  
 
ಪ್ರಾಣಲಿಂಗವ ಸುಯಿಧಾನವ ಮಾಡು ಮಗನೇ, ಎಂದು ಶ್ರೀ ಗುರು ಲಿಂಗವ ಕೊಟ್ಟನೇಕಾಂತದಲ್ಲಿ. ಕೊಟ್ಟ ಲಿಂಗದ ನೇಮವ ಮರೆಯದೆ, ಪ್ರಾಣಲಿಂಗದ ಪರಿಚಾರವ ಮಾಡುವರಾರೂ ಇಲ್ಲ. ಅಂಗದಿಂದ ಆ ಪ್ರಾಣಲಿಂಗ ಹಿಂಗಿದರೆ ಈ ಲಿಂಗವ ಮುಟ್ಟಿ ಪೂಜಿಸುವರೆಲ್ಲ ಭಂಗಿತರಾದರು. ಅರುಹಿರಿಯರೆಲ್ಲರಿಗೆ ಶರಣಸಂಬಂಧ ಸಾಲದ ಕಾರಣ, ಎಲೆಯ ಮರೆಯ ಕಾಯಂತೆ ಮರೆಯ ಮಾಡಿ, ಕುರುಹ ತೋರಿ ನೆರೆ ಜಗವನಾಳಿಗೊಂಡ ಕೂಡಲಚೆನ್ನಸಂಗಯ್ಯ.