Index   ವಚನ - 422    Search  
 
ಪರುಷವಿದ್ದುದ ಕಂಡು ಪರಿಣಾಮಬಡುವರು, ಇಷ್ಟಲಿಂಗ ಬಿದ್ದಿತ್ತೆಂದು ಕುತ್ತಿಕೊಂಡು ಸಾವರು. ಅರಿದರಿದು ಗುರುಶಿಷ್ಯಸಂಬಂಧವು. ಅರಿವುಳ್ಳವರಿಗಲ್ಲದೆ ಮತ್ತಾರಿಗೆಯೂ ಆಗದು. ಕುರುಹು ಘನವೋ? ಲಿಂಗ ಘನವೋ? ಅರಿವುಳ್ಳವರು ಹೇಳಿರೆ. ಮರಹು ಕವಿದಹುದೆಂದು ಕುರುಹ ತೋರಿದನಲ್ಲದೆ ಅರಿದರಿವ ಮರೆದರೆ ಕೂಡಲಚೆನ್ನಸಂಗಯ್ಯಂಗೆ ಅವನಂದೇ ದೂರ.