ತ್ರಿವಿಧೋದಕ ತ್ರಿವಿಧೋದಕವೆಂದು ತಿರುಗಿ ತಿರುಗಿ
ಕುಂಡಲಿಗನ ಹುಳುವಿನಂತೆ ಭ್ರಮೆಗೊಂಡು ಹೋದರಲ್ಲಾ
ನಿಮ್ಮ ಭಕ್ತರೆಂಬವರು, ನಿಮ್ಮ ಹಿರಿಯರೆಂಬವರು.
ತ್ರಿವಿಧೋದಕ ಒಬ್ಬರಿಗೆಯೂ ಆಗದು.
ತ್ರಿವಿಧೋದಕ ಅಳವಟ್ಟ ದೇಹ ಕುರುವಿಟ್ಟ ರೂಹಿನಂತೆ
ಕಣ್ಣೆವೆ ಹಳಚದೆ ನಿಬ್ಬೆರಗಾಗಿರಬೇಕು,
ಸಿಡಿಲು ಹೊಡೆದ ಹೆಣನಂತಿರಬೇಕು.
ಅಂತಲ್ಲದೆ ಬಯಲಿಂಗೆ
ತ್ರಿವಿಧೋದಕ ತ್ರಿವಿಧೋದಕವೆಂಬ
ಹೇಸಿಕೆಯ ಮಾತ ಕೇಳಲಾಗದು.
ಇದು ಕಾರಣ, ಕೂಡಲಚೆನ್ನಸಂಗಮದೇವಾ.
ನಿಮ್ಮ ತ್ರಿವಿಧೋದಕವ ಬಲ್ಲ
ಬಸವಣ್ಣಂಗೆ ನಮೋ ನಮೋ.