Index   ವಚನ - 458    Search  
 
ಅರ್ಪಿತವಿಡಿದು ಸಯಿದಾನವಾಯಿತ್ತೀಯೊಡಲಿಂಗೆ, ಅನರ್ಪಿತವಿಡಿದು ಪ್ರಸಾದವಾಯಿತ್ತೀ ಪ್ರಾಣಕ್ಕೆ. ತನು ಭೋಗಿಸುವುದು ಉಪಾಧಿ[ಕ] ಪ್ರಸಾದ, ಪ್ರಾಣ ಭೋಗಿಸುವುದು ಪರಿಣಾಮಪ್ರಸಾದ. ಈ ಭೇದವ ಭೇದಿಸಿ ಪ್ರಾಣಚೈತನ್ಯ ಲಿಂಗವೆಂದರಿದೆನಾಗಿ ಕೂಡಲಚೆನ್ನಸಂಗನೆಂಬ ಲಿಂಗ ಸ್ವಯವಾಯಿತ್ತು.