ಪ್ರಸಾದ ಪ್ರಸಾದವೆಂಬರು ಪ್ರಸಾದದ
ಕುಳವೆಂತಿಪ್ಪುದೆಂದರೆ:
ಕೊಟ್ಟವ ಗುರುವಲ್ಲ, ಕೊಂಡವ ಶಿಷ್ಯನಲ್ಲ,
ಅಂಜಿಕೆಯಿಂದ ಕೊಂಡುದು ಎಂಜಲ ಪ್ರಸಾದ,
ಅದೆಂತೆಂದರೆ:
ಈಡಾಪಿಂಗಳನಾಳಮಂ ಕಟ್ಟಿ,
ಸುಷುಮ್ನಾನಾಳದಲ್ಲಿ ಇಪ್ಪ ಪ್ರಾಣವೆಂಬ ಪರಿಚಾರಕನ ಕೈಯಿಂದ
ಅಗ್ನಿಯೆಂಬ ಸುವ್ವಾರನನೆಬ್ಬಿಸಲು,
ಮಸ್ತಕದಲ್ಲಿ ಇದ್ದ ಉತ್ತಮ ಪ್ರಸಾದವ ತಾಗಲೊಡನೆ
ಆ ಉತ್ತಮಪ್ರಸಾದ ಉದರಕ್ಕಿಳಿದು ಬಪ್ಪಲ್ಲಿ
ಮನವೆಂಬ ಪ್ರಸಾದಿ ಮುಯ್ಯಾಂತು ಕೊಂಡು
ಭೋಗಿಸ ಬಲ್ಲರೆ ಅದೆ ಅಚ್ಚ ಪ್ರಸಾದಿ ನಿತ್ಯಪ್ರಸಾದಿ.
ಅದಲ್ಲದೆ, ಧನವುಳ್ಳವರ ಕಂಡು
ಬೋಧಿಸಿ ಬೋಧಿಸಿಕೊಂಬ
ಪ್ರಸಾದಿಗಳ ಮೆಚ್ಚುವನೆ
ಕೂಡಲಚೆನ್ನಸಂಗಮದೇವ ?
Art
Manuscript
Music
Courtesy:
Transliteration
Prasāda prasādavembaru prasādada
kuḷaventippudendare:
Koṭṭava guruvalla, koṇḍava śiṣyanalla,
an̄jikeyinda koṇḍudu en̄jala prasāda,
adentendare:
Īḍāpiṅgaḷanāḷamaṁ kaṭṭi,
suṣumnānāḷadalli ippa prāṇavemba paricārakana kaiyinda
agniyemba suvvārananebbisalu,
mastakadalli idda uttama prasādava tāgaloḍane
ā uttamaprasāda udarakkiḷidu bappalli
manavemba prasādi muyyāntu koṇḍu
bhōgisa ballare ade acca prasādi nityaprasādi.
Adallade, dhanavuḷḷavara kaṇḍu
bōdhisi bōdhisikomba
prasādigaḷa meccuvane
kūḍalacennasaṅgamadēva?
ಸ್ಥಲ -
ಪ್ರಾಣಲಿಂಗಿಯ ಪ್ರಸಾದಿಸ್ಥಲ