Index   ವಚನ - 472    Search  
 
ಕಾಮವ ತೊರೆದೆವೆಂಬ ಗಾವಿಲ ಮನುಜರು ನೀವು ಕೇಳಿ: ಕಾಮವಳವಟ್ಟಿತ್ತಯ್ಯಾ ಬಸವಣ್ಣಂಗೆ, ಕಂಗಳ ಕಾಮಿಯಯ್ಯಾ ಪ್ರಭುದೇವರು, ಸರ್ವಾಂಗ ಕಾಮಿಯಯ್ಯಾ ಮಡಿವಾಳನು, ಈ ಮೂವರು ಕಾಮಸನ್ನಿಹಿತರು ಕಾಣಾ. ಕೂಡಲಚೆನ್ನಸಂಗಮದೇವಾ.