Index   ವಚನ - 479    Search  
 
ದಿವಿಗೆಯೊಳಗಣ ಜ್ಯೋತಿಯ ದಿವಿಜರೆತ್ತ ಬಲ್ಲರು? ಮನೋಜಲ ಹರಿವ ಠಾವನು ಮನೋಹರರೆತ್ತ ಬಲ್ಲರು? ತನುವಿನ ಸ್ನೇಹಗುಣವ ದೇಹಿಕರೆತ್ತ ಬಲ್ಲರೆ? ಅಷ್ಟತನುವಿನ ಭೇದವನು ಕೂಡಲಚೆನ್ನಸಂಗನಲ್ಲಿ ಆ ಲಿಂಗಿಯೇ ಬಲ್ಲನು.