Index   ವಚನ - 487    Search  
 
ಎನ್ನ ಮನವು ನಿಮ್ಮಲ್ಲಿ ನಟ್ಟು ತೆಗೆಯಲುಬಾರದ ಬೆರಗು ನೋಡಯ್ಯಾ. ಇಹವೆಂಬುದನರಿಯೆ, ಪರವೆಂಬುದನರಿಯೆ, ಪರಮಾನಂದದಲ್ಲಿದ್ದೆ ನೋಡಯ್ಯಾ. ಪರಮನ ನೆನಹೆ ನೆನಹಾಗಿ ಪರಮಸುಖದಲ್ಲಿ ಸುಖಿಸುತ್ತಿದ್ದೆನಯ್ಯಾ. ಅಪ್ರತಿಮ ಕೂಡಲಚೆನ್ನಸಂಗಯ್ಯಾ ಎನ್ನ ಬೆರಗಿನ ಭೇದವ ನೀನೆ ಬಲ್ಲೆಯಯ್ಯಾ.