Index   ವಚನ - 490    Search  
 
ಅಂಗ ಲಿಂಗ, ಲಿಂಗ ಅಂಗವೆಂದರಿದ ಬಳಿಕ, ಅಲ್ಲಿಯೇ ಕಾಣಿರೋ! ಬೇರೆ ತೋರಲಿಲ್ಲ, ಉಂಟೆಂದರಸಲಿಲ್ಲ, ಅಲ್ಲಿಯೇ ಕಾಣಿರೋ! ಕೂಡಲಚೆನ್ನಸಂಗಯ್ಯಲಿಂಗ ನಿರಂತರ ಅಲ್ಲಿಯೇ ಕಾಣಿರೊ.