Index   ವಚನ - 498    Search  
 
ಬಹಿರಂಗದ ಆರೋಗಣೆಯ ರುಚಿ ಅರಿಯಬಾರದು, ಏನು ಕಾರಣವೋ ಲಿಂಗಯ್ಯ? ಅಂತರಂಗದ ಆರೋಗಣೆಯ ಮಹಂತನೇ ಬಲ್ಲನೊ ಲಿಂಗಯ್ಯ. ಅರಿದು ಮರೆದಂಗೆ ವಿರೋಧವೆ? ಸಜ್ಜನಕ್ಕೆ ಉಪಚಾರವುಂಟೆ ಲಿಂಗಯ್ಯ? ಅಲ್ಲಿ ಸೋಂಕಿದ ಬಳಿಕ ನೋಡಲಿಲ್ಲ, ಕೂಡಲಚೆನ್ನಸಂಗಯ್ಯನ.