Index   ವಚನ - 529    Search  
 
ಅಕ್ಷರಪಂಚಕದ ನಿಕ್ಷೇಪವನರಿಯಬಲ್ಲರೆ ಬೋಳು, ಕುಕ್ಷಿಯೊಳಗೈವತ್ತೆರಡಕ್ಷರದ ಲಕ್ಷಣವನರಿಯಬಲ್ಲರೆ ಬೋಳು, ಅಕ್ಷಯನಿಧಿ ಕೂಡಲಚೆನ್ನೆಸಂಗಯ್ಯ ಭವಕ್ಕೆ ಬೋಳು.