Index   ವಚನ - 535    Search  
 
ಜಲದಲ್ಲಿ ಹುಟ್ಟಿದ ಕೆಸರು ಕ್ಷೀರದಲ್ಲಿ ತೊಳೆದರೆ ಹೋಹುದೆ? ಜಲದಲ್ಲಿ ತೊಳೆದಡಲ್ಲದೆ. ಜೀವನಲ್ಲಿ ಹುಟ್ಟಿದ ಪ್ರಪಂಚು ಪಾಪಂಗಳು ಬ್ರಹ್ಮದಂಡ ಪ್ರಾಯಶ್ಚಿತ್ತದಲ್ಲಿ ಹೋಹವೆ? ಶಿವಸಂಸ್ಕಾರಿಯಾಗಿ 'ಅಕ್ಷರೋsಸಿ' ಎಂಬ ಮಂತ್ರದಿಂದ ಜೀವನ ಪಾಪವು ಜೀವನಲ್ಲಿಯೇ ಕಳೆವುದು "ಜೀವಾತ್ಮಾ ಪರಮಾತ್ಮಾ ಚೇನ್ಮುಕ್ತಾನಾಂ ಪರಮಾ ಗತಿಃ| ಅವ್ಯಯಃ ಪುರುಷಃ ಸರ್ವಕ್ಷೇತ್ರಜ್ಞೋsಕ್ಷಯ ಏವ ಚ"|| ಎಂದುದಾಗಿ,- ಇದು ಕಾರಣ ಕೂಡಲಚೆನ್ನಸಂಗಯ್ಯಾ. ನಿಮ್ಮ ಶರಣನ ಕಾಯವು ಸುಕ್ಷೇತ್ರವೆಂದೆನಿಸೂದು.