Index   ವಚನ - 552    Search  
 
ದೇಹಿಯಲ್ಲ ನಿರ್ದೇಹಿಯಲ್ಲ, ಬೋಧಕನಲ್ಲ ನಿರ್ಬೋಧಕನಲ್ಲ, ಕಾಮಿಯಲ್ಲ, ನಿಃಕಾಮಿಯಲ್ಲ, ಆಸೆವಿಡಿದು ಬಂದ ಆಮಿಷನಲ್ಲ. ಅವಗುಣವಿಲ್ಲದ ನಿರ್ಗುಣಿ ನಿರಂತರ, ಕೂಡಲಚೆನ್ನಸಂಗನ ಶರಣ ನೋಡಯ್ಯಾ.