Index   ವಚನ - 557    Search  
 
ಆದಿಸ್ಥಲವೆಂದು ನುಡಿವರು, ಅನಾದಿಸ್ಥಲವೆಂದು ನುಡಿವರು, ಆದಿಗೆ ಒಡಲುಂಟು, ಅನಾದಿಗೆ ಒಡಲಿಲ್ಲ. "ನ ಚ ಭೂಮಿರ್ನ ಚ ಜಲಂ ನ ಚ ತೇಜೋ ನ ಚ ವಾಯುಃ ನ ಚಾಕಾಶಃ" ಇವೆಲ್ಲವೂ ಘಟಕ್ಕೆ ಸಂಬಂಧವಾಗಿ ಘಟ ಕೆಡುವುದು. ಇಂಥ ನಿರ್ದೇಹಿ ಶರಣಂಗಲ್ಲದೆ ಅರಿಯಬಾರದು, ಕೂಡಲಚೆನ್ನಸಂಗಯ್ಯಾ