Index   ವಚನ - 561    Search  
 
ಪ್ರಸಾದ ಕಾಯವಾದ ಬಳಿಕ ಸರ್ವಾಂಗ ಉತ್ತಮಾಂಗ. ಪ್ರಾಣ ಲಿಂಗವಾದ ಬಳಿಕ ಸದಾ ಸನ್ನಿಹಿತ ಲಿಂಗ. ಶರಣನಲ್ಲಿ ಭಾವ ಭೇದವಿಲ್ಲ, ನಿರಂತರ ಲಿಂಗಸಂಗಿ. "ಅಕಾಯೋ ಭಕ್ತಕಾಯಸ್ತು" ಎಂದುದು ಕೂಡಲಚೆನ್ನಸಂಗನ ವಚನ.