Index   ವಚನ - 579    Search  
 
ಪಥವನರಿಯದೆ ಮಂಡೆಯ ಬೋಳಿಸಿಕೊಂಡರೆ ಜಂಗಮವೆ? ಅಲ್ಲ, ಹಮ್ಮು ಬಿಮ್ಮು ಗಮನನಾಸ್ತಿಯಾದರೆ ಜಂಗಮ. ಸತ್ತರೆ ತೆಗೆವರಿಲ್ಲೆಂದು ಕಟ್ಟಿಕೊಂಡರೆ ಭಕ್ತನೆ? ಅಲ್ಲ, ಅರ್ಥ ಪ್ರಾಣ ಅಭಿಮಾನಕ್ಕೆ ವಿರೋಧಿಯಾದರೆ ಭಕ್ತ. ತನುಗುಣ ನಾಸ್ತಿಯಾಗಿ ಮನ ಲಿಂಗದಲ್ಲಿ ಸಿಲಿಕಿದಡೆ ಜಂಗಮ. ಇದು ಕಾರಣ, ಕೂಡಲಚೆನ್ನಸಂಗಯ್ಯಾ ಪ್ರಭು ಜಂಗಮ, ಬಸವ ಭಕ್ತ.