Index   ವಚನ - 581    Search  
 
ಗುರುವಿನ ಗುರು ಪರಮಗುರು ಜಂಗಮವೆಂದೆನಿಸಿಕೊಂಬರು. ದೀಕ್ಷೆ ಶಿಕ್ಷೆ ಮಾಡಿದಲ್ಲಿ ದಾಸೋಹವ ಮಾಡಿಸಿಕೊಳ ಕರ್ತರಲ್ಲದೆ ತನ್ನ ಪ್ರಾಣಲಿಂಗವ ಕೊಡ ಕರ್ತರಲ್ಲ. ಪ್ರಾಣಲಿಂಗವ ಕೊಟ್ಟು ಗುರುವಾದ ಬಳಿಕ, ಜಂಗಮಸ್ಥಲಕ್ಕೆ ಭಂಗಹೊದ್ದಿತ್ತು, ಕೂಡಲಚೆನ್ನಸಂಗಮದೇವಾ.