Index   ವಚನ - 584    Search  
 
ಭೂಮಿಯ ಮೇಲೆ ಇದ್ದ ಅಚಲಪೀಠವೆಲ್ಲಾ ಲಿಂಗವೆ? ಅಲ್ಲ, ಲಿಂಗಮೂರ್ತಿ ಇಲ್ಲಾಗಿ. ಜಾಯತೇ ಚರಾದಿಗಳೆಲ್ಲಾ ಜಂಗಮವೆ? ಅಲ್ಲ, ಆಚಾರ ಸಮತೆ ಸಂಬಂಧವಿಲ್ಲಾಗಿ, ಇವರೆಲ್ಲರೂ ಉಪಜೀವಿಗಳು. ಕೂಡಲಚೆನ್ನಸಂಗಮದೇವ ಸಹವಾಗಿ ಉಭಯಲಿಂಗ ಜಂಗಮವಾದವರಿಗೆ ನಮೋ ನಮೋಯೆಂಬೆ.