Index   ವಚನ - 587    Search  
 
ಮನದದ್ಭುತವಹಂಕಾರವಳಿಯದನ್ನಕ್ಕ ಸದ್ಭಕ್ತಿ ಸದರವೆಂತೆಂಬೆನು? ಕಾಯ ಸಮ್ಮೋಹಿಯನು ಲಾಂಛನಧಾರಿಯೆಂಬೆನು, ಜೀವ ಸಮ್ಮೋಹಿಯನು ಸಂಸಾರಿಯೆಂಬೆನು. ಇದು ಕಾರಣ, ಮಿಗೆ ಮಿಗೆ ಮೀಸಲು ಸಲೆ ಸಹಜ ಕೂಡಲಚೆನ್ನಸಂಗನೆಂಬೆನು.