Index   ವಚನ - 592    Search  
 
ಸಾಲೋಕ್ಯ ಬೇಕೆಂದು ಪೂಜಿಸಿ ಸಾಲೋಕ್ಯವ ಹಡೆವರು, ಸಾಮಿಪ್ಯ ಬೇಕೆಂದು ಪೂಜಿಸಿ ಸಾಮೀಪ್ಯವ ಹಡೆವರು, ಸಾರೂಪ್ಯ ಬೇಕೆಂದು ಪೂಜಿಸಿ ಸಾರೂಪ್ಯವ ಹಡೆವರು, ಸಾಯುಜ್ಯ ಬೇಕೆಂದು ಪೂಜಿಸಿ ಸಾಯುಜ್ಯವ ಹಡೆವರು. ಇಂತೀ ನಾಲ್ಕು ಪದವಿಗಳು ಬೇಕೆಂದು ಪೂಜಿಸಿ ನಾಲ್ಕು ಪದವಿಗಳ ಬೇಡಿ ಇತ್ತಿತ್ತಲಾದರಲ್ಲದೆ, ಅವರು ನಿಮ್ಮ ವೇದಿಸಲರಿಯರು. ಅಂಥವರೆಲ್ಲ ಕೊಟ್ಟರೆ ಕೊಂಡಾಡುವ ಕೂಲಿಕಾರರು. ನಿಮ್ಮ ಬಲ್ಲರೆ? ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನಲ್ಲದೆ.