ಭವಿಯ ತಂದು ಪೂರ್ವಾಶ್ರಯವ
ಕಳೆದು ಭಕ್ತನ ಮಾಡಿದ ಬಳಿಕ,
ಪೂರ್ವವನ್ನೆತ್ತಿ ನುಡಿವ ಶಿವದ್ರೋಹಿಯ
ಮಾತ ಕೇಳಲಾಗದು.
ಲಿಂಗವೆ ಗುರು, ಗುರುವೇ ಲಿಂಗವೆಂದು,
ಹೆಸರಿಟ್ಟು ಕರೆವ
ಗುರುದ್ರೋಹಿಯ ಮಾತ ಕೇಳಲಾಗದು.
ಹೆಸರಿಲ್ಲದ ಅಪ್ರಮಾಣ ಮಹಿಮನನು
ಹೆಸರಿಟ್ಟು ಕರೆವ
ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವವಿಲ್ಲದ ಶಿಷ್ಯ, ನೇಮವಿಲ್ಲದ ಗುರು,
ಹೆಸರಿಲ್ಲದ ಲಿಂಗ
ಈ ತ್ರಿವಿಧವನರಿಯದೆ ಕೆಟ್ಟು ಹೋದರು,
ಕೂಡಲಚೆನ್ನಸಂಗಯ್ಯಾ.
Art
Manuscript
Music
Courtesy:
Transliteration
Bhaviya tandu pūrvāśrayava
kaḷedu bhaktana māḍida baḷika,
pūrvavannetti nuḍiva śivadrōhiya
māta kēḷalāgadu.
Liṅgave guru, guruvē liṅgavendu,
hesariṭṭu kareva
gurudrōhiya māta kēḷalāgadu.
Hesarillada apramāṇa mahimananu
hesariṭṭu kareva
liṅgadrōhiya māta kēḷalāgadu.
Pūrvavillada śiṣya, nēmavillada guru,
hesarillada liṅga
ī trividhavanariyade keṭṭu hōdaru,
kūḍalacennasaṅgayyā.