Index   ವಚನ - 613    Search  
 
ಕ್ರಿಯಾಲಿಂಗದ ಲಿಂಗಿಗಳೆಲ್ಲ ಕ್ರೀಯಳಿದ ಭಕ್ತರೆಂಬರಯ್ಯಾ. ಕ್ರೀಯಳಿದ ಭಕ್ತಂಗೆ ಲಿಂಗವುಂಟೆ? ಕ್ರೀಯಳಿದ ಭಕ್ತಂಗೆ ಜಂಗಮವುಂಟೆ? ಕ್ರೀಯಳಿದ ಭಕ್ತಂಗೆ ಪ್ರಸಾದವುಂಟೆ? ಕ್ರೀಯಳಿದು ನಿಃಕ್ರೀಯಲ್ಲಿ ನಿಂದ ಕೂಡಲಚೆನ್ನಸಂಗಾ ನಿಮ್ಮ ಶರಣ.