ತಾಪತ್ರಯವಿಲ್ಲದವ, ವ್ಯಾಪ್ತಿಯನರಿದವ,
ಇರುಳು ಹಗಲೆಂದು ಮನದಲ್ಲಿ ತಾಳದವ,
ತಾಳೋಷ್ಠ ಸಂಪುಟಕ್ಕೆ ಬಾರದವ,
ಭವಚ್ಛೇದ ಕಾಮಭಂಜನ ಕಾಯವಿಲ್ಲದವ,
ಕಾಲನ ಗೆದ್ದವ, ಮಾಯವ ತೊರೆದವ,
ಮತ್ತೊಂದನರಿಯದವ
ನಮ್ಮ ಕೂಡಲಚೆನ್ನಸಂಗನನರಿದು ಸುಖಿಯಾದವ.
Art
Manuscript
Music
Courtesy:
Transliteration
Tāpatrayavilladava, vyāptiyanaridava,
iruḷu hagalendu manadalli tāḷadava,
tāḷōṣṭha sampuṭakke bāradava,
bhavacchēda kāmabhan̄jana kāyavilladava,
kālana geddava, māyava toredava,
mattondanariyadava
nam'ma kūḍalacennasaṅgananaridu sukhiyādava.