Index   ವಚನ - 619    Search  
 
ಕಂಗಳ [ನೋಟ] ಲಿಂಗಕ್ಕೆ ಅರ್ಪಿತ, ಮನ ಮುಟ್ಟಿದ ಆರೋಗಣೆಯೆಂಬುದೇನೊ? ಸಂಕಲ್ಪಿವಿರಹಿತ ಶರಣನು, ಆಗಮವಿರಹಿತ ಶರಣನಲ್ಲದೇನು? ಶರಣಂಗೆ ಸೀಮೆಯೆಂಬುದೇನೊ? ನಿರ್ಭಾವದ ಕೈಯಲು ಮುಟ್ಟಿ ಲಿಂಗಾರ್ಪಿತವು, ಮಿಕ್ಕುದು ಕಿಲ್ಬಿಷ ಕೂಡಲಚೆನ್ನಸಂಗಮದೇವಾ.