Index   ವಚನ - 630    Search  
 
ಅನಾಚಾರದ ಕಾಯ[ಕ]ವ ಮಾಡಿ, ಪದಾರ್ಥವನೆ ಗಳಿಸಿ ಆ ಪದಾರ್ಥವನೆ ಪಾಕವ ಮಾಡಿ, ಓಗರವ ಮಾಡುವುದು, ಆ ಓಗರವನೆ ಪ್ರಸಾದವ ಮಾಡಿ, ಆ ಪ್ರಸಾದವನೆ ಓಗರವ ಮಾಡಿ! ಇದು ಕಾರಣ, ಕೂಡಲಚೆನ್ನಸಂಗನ ಶರಣನು ಅರ್ಪಿತವನಲ್ಲದೆ ಮಾಡನು.