Index   ವಚನ - 641    Search  
 
ಸ್ಥಲದಿಂದ ಸ್ಥಲವನರ್ಪಿಸೂದೊಡಲ ಗುಣ. ನಿಃಸ್ಥಲದಿಂದ ನಿಃಸ್ಥಲವನರ್ಪಿಸೂದೆ ಪ್ರಾಣಗುಣ. ಸ್ಥಲವೆನ್ನದೆ ನಿಃಸ್ಥಲವೆನ್ನದೆ ನೋಡದೆ ಆರಯ್ಯದೆ ಅರ್ಪಿಸೂದು ನಿರ್ಗುಣ. ಇಂಥ ಮಹಂತರ ತೋರಿ ಬದುಕಿಸಯ್ಯಾ ಕೂಡಲಚೆನ್ನಸಂಗಮದೇವಾ.