ನಯನಾಗ್ರದ ನೋಟದ ಸುಖವ
ಲಿಂಗಾರ್ಪಿತವೆಂಬರು,
ನಾಸಿಕಾಗ್ರ ಪರಿಮಳದ ಸುಖವ
ಲಿಂಗಾರ್ಪಿತವೆಂಬರು,
ಶ್ರೋತ್ರಾಗ್ರದ ಕೇಳುವ ಸುಖವ
ಲಿಂಗಾರ್ಪಿತವೆಂಬರು,
ಜಿಹ್ವಾಗ್ರದ ರುಚಿಯ ಸುಖವ
ಲಿಂಗಾರ್ಪಿತವೆಂಬರು,
ಮುಟ್ಟುವ ತ್ವಕ್ಕಿನ ಸುಖವ
ಲಿಂಗಾರ್ಪಿತವೆಂಬರು.
ಇದು ಲಿಂಗಾರ್ಪಿತವೆ?
ಅರ್ಪಿತವ ಮಾಡದೆ,
ಅನರ್ಪಿತವ ಹೊದ್ದದೆ, ಅರ್ಪಿಸಬೇಕು,
ಅರ್ಪಿಸುವ ಭಾವನೆವುಳ್ಳನ್ನಕ್ಕ
ಶರಣೆನಿಸಬಾರದು,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Nayanāgrada nōṭada sukhava
liṅgārpitavembaru,
nāsikāgra parimaḷada sukhava
liṅgārpitavembaru,
śrōtrāgrada kēḷuva sukhava
liṅgārpitavembaru,
jihvāgrada ruciya sukhava
liṅgārpitavembaru,
muṭṭuva tvakkina sukhava
liṅgārpitavembaru.
Idu liṅgārpitave?
Arpitava māḍade,
anarpitava hoddade, arpisabēku,
arpisuva bhāvanevuḷḷannakka
śaraṇenisabāradu,
kūḍalacennasaṅgamadēvā.