Index   ವಚನ - 653    Search  
 
ಲಿಂಗಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ. ಶರಣ ಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ, ಪ್ರಸಾದ ಭೋಗೋಪಭೋಗದಲ್ಲಿ ಆಪ್ಯಾಯನಪ್ರಸಾದಿ, ಕೊಡದ ಕೊಳದ ಉಭಯ ರಹಿತನು. ಕ್ರೀ ಹಿಂದಾದ, ಲಿಂಗ ಮುಂದಾದ ಪ್ರಸಾದಿ. ಪ್ರಸಾದಕ್ಕೆತಾನವಗ್ರಾಹಿ, ಪ್ರಸಾದಿ ತನಗವಗ್ರಾಹಕನು. ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆ.