Index   ವಚನ - 656    Search  
 
ತನು ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ, ಮನ ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ, ಕಿವಿಗಳು ಕೇಳಿದ ಪದಾರ್ಥ ಲಿಂಗಾರ್ಪಿತವಲ್ಲ, ಕಂಗಳು ನೋಡಿದ ಪದಾರ್ಥ ಲಿಂಗಾರ್ಪಿತವಲ್ಲ, ಘ್ರಾಣ ಸೋಂಕಿದ ಪದಾರ್ಥ ಲಿಂಗಾರ್ಪಿತವಲ್ಲ, ಜಿಹ್ವೆ ತಾಗಿದ ಪದಾರ್ಥ ಲಿಂಗಾರ್ಪಿತವಲ್ಲ. ತ್ವಚೆ ತಾಗಿದ ಪದಾರ್ಥ ಲಿಂಗಾರ್ಪಿತವಲ್ಲ. ಅಹುದೆಂಬುದ [ನುಡಿಯ], ಅಲ್ಲೆಂಬುದ ನುಡಿಯ, ಬೇಕು ಬೇಡೆಂಬುದಿಲ್ಲ, ಸಾವಯವೆಂಬುದಿಲ್ಲ. ನಿರವಯದಲ್ಲಿ ಸಕಲಭೋಗಂಗಳ ಭೋಗಿಸುವನು. ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ.