Index   ವಚನ - 675    Search  
 
ಆಯತಲಿಂಗದಲ್ಲಿ ಆಗಾಗಿ ಭಕ್ತನೆನಿಸೂದಯ್ಯಾ, ಸ್ವಾಯತಲಿಂಗದಲ್ಲಿ ಆಗಾಗಿ ಯುಕ್ತನೆನಿಸೂದಯ್ಯಾ, ಸಂಯೋಗಲಿಂಗದಲ್ಲಿ ಆಗಾಗಿ ಶರಣನೆನಿಸೂದಯ್ಯಾ, ಪ್ರಾಣಕ್ಕೆ ಪ್ರಾಣವಾಗಿ ಉಭಯ ಪ್ರಾಣವೆಂದೆನಿಸೂದಯ್ಯಾ, ಘನಕ್ಕೆ ಘನವಾದಲ್ಲಿ ಮನವೇದ್ಯನೆಂದೆನಿಸೂದಯ್ಯಾ, ಕೂಡಲಚೆನ್ನಸಂಗಯ್ಯಾ ಲಿಂಗಸರ್ವಾಂಗದಲ್ಲಿ ಅನುಭಾವದಿಂದಧಿಕವೆನಿಸೂದಯ್ಯಾ.